ಕಮತಗಿಯಲ್ಲಿ ಡಿಸಿಎಂ ಕಾರಜೋಳ ಹಾಗೂ ಸಂತ್ರಸ್ತರ ನಡುವೆ ವಾಗ್ವಾದ : ಆಶ್ರಯ ಮನೆ ಪರಿಶೀಲನೆ ವೇಳೆ ಮಾತಿನ ಚಕಮಕಿ


ಮುಧೋಳ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಮನೆಗಳ ಹಕ್ಕುಪತ್ರ ಸಂಬಂಧ ಸಂತ್ರಸ್ತರು ತರಾಟೆಗೆ ತೆಗೆದುಕೊಂಡು ಘಟನೆ ನಡೆದಿದೆ.

ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಡಿಸಿಎಂ ಕಾರಜೋಳ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರು ಆಶ್ರಯ ಮನೆಗಳ ಪರಿಶೀಲನೆ ನಡೆಸಿದರು.

ಈ ವೇಳೆ ಡಿಸಿಎಂ ಕಾರಜೋಳ ಅವರು ಆಶ್ರಯ ಮನೆಗಳಿಗೆ ಬಂದು ನಿರಾಶ್ರಿತರು ವಾಸ ಮಾಡಬಹುದು ಎಂದು ಸೂಚಿಸಿದರು. ಇದಕ್ಕೆ ಸ್ಥಳದಲ್ಲೇ ಇದ್ದ ನಿರಾಶ್ರಿತರು ಪ್ರತಿಕ್ರಿಯಿಸಿ, 2009ರಲ್ಲಿ ಉಂಟಾದ ಪ್ರವಾಹದ ವೇಳೆ ಕಟ್ಟಿರುವ ಮನೆಗಳಿಗೆ ಇನ್ನು ಸರ್ಕಾರ ಹಕ್ಕುಪತ್ರ ಕೊಟ್ಟಿಲ್ಲ. ಹೀಗಾಗಿ ಇಲ್ಲಿಗೆ ಬಂದು ವಾಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಆಗ ಕೋಪಗೊಂಡ ಕಾರಜೋಳ ಅವರು ನಾವು ಪರಿಶೀಲನೆ ಮಾಡಲು ಬರುತ್ತೇವೆ ಎಂದು ತಿಳಿದು ಖಾಲಿ ಮನೆಗಳಲ್ಲಿ ಸಾಮಾನು ತಂದಿಟ್ಟಿದ್ದೀರಿ ಎಂದು ನಮಗೆ ಗೊತ್ತು ಎಂದರು. ಈ ವೇಳೆ ಸಂತ್ರಸ್ತರು ಆಕ್ರೋಶಗೊಂಡಾಗ ವಸತಿ ಸಚಿವ ವಿ.ಸೋಮಣ್ಣ ಸಮಾಧಾನಪಡಿಸಿದರು.
ನವೀನ ಹಳೆಯದು