ಹೈಟೆಕ್ ಹಳ್ಳಿಯ ಸುತ್ತ ಒಂದು ಕೀರುನೋಟ


ನಮ್ಮ ಮೆಳ್ಳಿಗೇರಿ ಎಂಬ ಪುಟ್ಟ ಸುಂದರ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುವುದು.ಇದು ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಯೇ ನಮ್ಮ ಮೆಳ್ಳಿಗೇರಿ.ಇದು ಬೆಳಗಾವಿ ವಿಭಾಗದ ವ್ಯಾಪ್ತಿಗೆ ಒಳಪಡುವ ಪುಟ್ಟ ಗ್ರಾಮ.
ಈ ಊರಿನಿಂದ 53 ಕಿಮೀ ನಲ್ಲಿ ಬಾಗಲಕೋಟ ಜಿಲ್ಲೆಯಲ್ಲಿದೆ. ರಾಜ್ಯಾಧಾನಿಗೆ 524ಕಿಮೀ ದೂರದಲ್ಲಿದೆ.ಇಲ್ಲಿಯ ಜನಸಂಖ್ಯೆ 2922 ಇದರಲ್ಲಿ 1448 ಪುರುಷರು ಮತ್ತು 1475 ಮಹಿಳೆಯರು ವಾಸವಾಗಿದ್ದಾರೆ.ಜೊತೆಗೆ ಈ ಗ್ರಾಮದಲ್ಲಿ ವಾಸವಾಗಿರುವ ಒಟ್ಟು ಕುಟುಂಬಗಳ ಸಂಖ್ಯೆ 536.ಈ ಮಾಹಿತಿ 2011ರ ಜನಗಣತಿಯ ಪ್ರಕಾರ ನನಗೆ ಸಿಕ್ಕ ಮಾಹಿತಿ ಇದು. ಈ ಊರ ಇತಿಹಾಸ ಕೆದಕಿದಾಗ ಈ ಊರಿಗೆ ಮೆಳ್ಳಿಗೇರಿ ಎಂದು ಯಾಕೆ ಬಂತು?ಹೇಗೆ ಬಂತು ಎಂಬುದು ಅರಿತರೆ ಅದಕ್ಕೊಂದು ಅರ್ಥವಿರುತ್ತದೆ ಅಲ್ವಾ. ಬನ್ನಿ ಒಂದು ಇದಕ್ಕೆ ಕಾರಣವೂ ಇದೆ.ಹಳ್ಳಿಗಳಲ್ಲಿ ಕಾರು ಹುಣ್ಣಿಮೆ ಎಂದರೆ ಎತ್ತುಗಳ ಪೂಜಿಸಿ ಆರಾಧಿಸುವ ದಿನ ಜೊತೆಗೆ ಕಾರು ಹುಣ್ಣಿಮೆಯ ದಿನ ಎತ್ತುಗಳನ್ನು ಅಂದರೆ ಬಿಳಿ ಎತ್ತು ಮತ್ತು ಕರಿ ಎತ್ತುಗಳ
ಓಡಿಸುವ ಪ್ರತೀತಿ ಹೀಗಿರಬೇಕಾದರೆ ಈ ಓಟದಲ್ಲಿ ಬಿಳಿ ಎತ್ತು ಗೆದ್ದರೆ ಮುಂಗಾರು ಮಳೆಯಲ್ಲಿ ಜೋಳ ಬೆಳೆಯುತ್ತೆ ಅಂತಾ ಅರ್ಥ ಒಂದು ವೇಳೆ ಕರಿ ಎತ್ತು ಬಂದರೆ ಹಿಂಗಾರು ಬೆಳೆಗೆ ಒತ್ತು ಅಂತಾ ಹೀಗಿರಬೇಕಾದರೆ ಒಂದೂರಲ್ಲಿ ಕರಿ ನೆಡಿಬೇಕಾದರೆ ಅಲ್ಲಿ ಎತ್ತು ಓಡಿ ಹೋಗುತ್ತಿತ್ತು ಅದನ್ನು ಪರ ಉರಿನವನು ಎತ್ತಿನ ಬಾಲ ಕತ್ತರಿಸಿ ತನ್ನುರತ್ತ ಓಡಲು ಪ್ರಾರಂಭಿಸಿದ ಅವನನ್ನು ಬೆನ್ನು ಹತ್ತಿದ ಆ ಊರಿನವರು ಯಾಕೆಂದರೆ ಎತ್ತಿನ ಬಾಲ ತೆಗೆದುಕೊಂಡು ಹೋದವರಿಗೆ ಕರಿ ಎಂಬ ಪ್ರತೀತಿ ಇದೆ ಹಾಗೆ ಎತ್ತಿನ ಬಾಲ ತೆಗೆದು ಕೊಂಡನ ರುಂಡ ಮುಂಡವನ್ನು ಬೇರಪಡಿಸಿ ಅವನ ರುಂಡವನ್ನು ತನ್ನುರಿನತ್ತಾ ಸಾಗಬೇಕಿದ್ದರೆ ನೀರಡಿಕೆಯಾಗಿ ಬಳಲುತಿರಳು ಆಗ ಕಂಡಿದ್ದೆ ನಮ್ಮೂರ ಕೆರೆ ಆ ಕೆರೆಗೆ ಆ ರುಂಡವನ್ನು ಇಟ್ಟು ನೀರು ಕುಡಿಯಲು ಧಾವಿಸಿದರು ಆದರೆ ನೀರಿನ ದಾಹ ತಿರಿದ ಬಳಿಕ ಆ ರುಂಡವನ್ನು ಎತ್ತಲು ನೋಡಿದಾಗ ಮೇಲೆ ಬರಲಿಲ್ಲ ಅದು ಎಲ್ಲಿಯೇ ಬೇರುರಿದನ್ನು ಅರಿತ ಅವರು ಇವತ್ತಿನ ಕಿಶೋರಿ ಗ್ರಾಮದ ವರೆಗೆ ಎತ್ತುಗಳನ್ನು ಬಂಡೆ ಹೂಡಿದರು ಹಗ್ಗ ಹಚ್ಚಿದರು ಆದರೆ ಎತ್ತುಗಳು ಕಿರ್ ಎಂದವು ಅದಕ್ಕೆ ಆ ಊರು "ಕಿಶೋರಿ"  ಗ್ರಾಮವಾಗಿ ಹುಟ್ಟಿಕೊಂಡಿತು.ಇನ್ನೂ ಮೆಳ್ಳಿ ಅಂದ್ರೆ ಗುಂಪು ಎಂದರ್ಥ ಅಂದು ಗುಂಪಾಗಿ ಎತ್ತು ಹೂಡಿದಕ್ಕೆ ಮೆಳ್ಳಿಗೇರಿ ಎಂದು ಹೆಸರು ಬಂತು ಜೊತೆಗೆ ಪ್ರತಿ ವರ್ಷವೂ ಊರಲ್ಲಿ ಕಾರು ಹುಣ್ಣಿಮೆ ಸಂಭ್ರಮ ಸಡಗರದಿಂದ ಸಾಗುತ್ತೆ ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಈ ಗ್ರಾಮ ಅಂದರೆ ಮೂಗು ಮುರಿಯುವವರೇ ಜಾಸ್ತಿ ಈ ಗ್ರಾಮಕ್ಕೆ ಹೆಣ್ಣು ಕೊಡಲು ಯಾರು ಕೂಡಾ ಮುಂದೆ ಬರುತ್ತಿರಲಿಲ್ಲ.ಯಾಕೆಂದರೆ ಹಿಂದೆ ನೀರು ತರಲು ಕುಂಬಾರ ಕೆರಿ,ಬಾವಿಗಳಿಂದ ಹೊತ್ತು ತರುವ ಸಂಪ್ರದಾಯ ಒಂದಿತ್ತು.ಜೊತೆಗೆ ಇಲ್ಲಿ ಊರಲ್ಲಿ ಹಿಂದೆ ಕಳ್ಳರ ಕಾಟ ತುಂಬಾ ಇತ್ತು ಇವುಗಳನ್ನು ತಡೆಯಲು ಹುಡೇ ನಿರ್ಮಿಸಿದರು.ಇದರ ಮೇಲೆ ನಿಂತು ಊರ ಕಾವಲುಗಾರಿಕೆ ಮಾಡುತ್ತಿದ್ದರು.ಆದರೆ ಇಂದು ಅದು ಕಾಣಲು ಸಿಗುವುದಿಲ್ಲ ಅದರ ಜಾಗಕ್ಕೆ ಇಂದು ನಿಮಗೆ ಕಾಣಸಿಗುವುದು ಶ್ರೀ ಮಹಾಲಕ್ಷ್ಮೀ ಮಂದಿರ.ಇನ್ನೂ ಈ ಊರ ಗ್ರಾಮದೇವತೆ ಶ್ರೀ ಸತ್ಯದೇವಿ ಮಹಾಮಾತೆ ಈ ಮಾತೇ ನಮ್ಮೂರಿನ ಆರಾಧ್ಯ ದೈವ. ಈ ಗುಡಿಯ ಅರ್ಚಕರ ಮನೆಗಳಿಗೆ ಬಾಗಿಲುಗಳಿಲ್ಲ ವಿಶೇಷವಾಗಿ ಸಿಂಗನ್ನವರ ಮನೆತನಗಳಲ್ಲಿ ಇಂದಿಗೂ ನೋಡಬಹುದು. ಈ ತಾಯಿ ಸದಾ ಅವರ ಮನೆಗಳನ್ನು ಯಾವದೇ ಕಳ್ಳತನವಾಗದಂತೇ ಇಂದಿಗೂ ಕಾಪಾಡಿಕೊಂಡು ಬಂದಿದ್ದಾಳೆ ಮಾತೇ ಎಂಬ ಪವಾಡವಿದೆ.ಜೊತೆಗೆ ಪೂರ್ವಿಕರು ಹೇಳುವ ಪ್ರಕಾರ ಒಂದು ಊರಲ್ಲಿ  ಡೊಳ್ಳಿನ ಸ್ಪರ್ಧೆ ನಡೆದಾಗ ನಮ್ಮೂರಿನ ಒಬ್ಬರ ಡೊಳ್ಳು ಕಳುವಾಗದ ಹುಡುಕಿದರೂ ಸಿಗಲಿಲ್ಲ.ಎಲ್ಲರೂ ಬೇಸರದಿಂದ ಊರತ್ತ ತೆರಳಿದಾಗ ಒಂದು ಅಚ್ಚರಿ ಕಾದಿತ್ತು.ಎಲ್ಲರೂ ಕಳದು ಹೋಗಿದೆ ಎಂಬ ಡೊಳ್ಳು ಊರಲ್ಲಿ ದೇವಸ್ಥಾನ ಸೇರಿತ್ತು ಇದು ಒಂದು ಪವಾಡವೇ ಸರಿ. ಈ ಊರಲ್ಲಿ ಪ್ರತಿ ವರ್ಷ 5 ದಿನಗಳವರೆಗೆ ವಿಶ್ವ ಕಲ್ಯಾಣಕ್ಕಾಗಿ ಊರಿಗೆ ಊರೇ ಉಪವಾಸ ಆಚರಣೆ ಮಾಡುವರು ಇದಕ್ಕೆ ಸಪ್ತಾಹ ಎಂದು ಹೆಸರು ಇದು ಶುಕ್ರವಾರದಂದು ಬೆಳಗಿನ ಜಾವ ಪಾದಯಾತ್ರೆ ಮೂಲಕ ಗಲಗಲಿಗೆ ತೆರಳಿ ಕೃಷ್ಣಾ ನದಿಯಿಂದ ನೀರು ಹೊತ್ತು ತಂದು ಆ ನೀರಿನಿಂದ ದೇವಸ್ಥಾನ ಶುಚಿಗೊಳಿಸಿ ಪೂಜೆ ಮಾಡಿ 5 ದಿನ ಅಂದರೆ ಮಂಗಳವಾರ ಅಲ್ಪ ಪ್ರಸಾದ ಸೇವಿಸಿ ಕೊನೆ ಮಾಡುವರು.ಇನ್ನೂ ಶಿವರಾತ್ರಿಯ ದಿನದಂದು ಸತತ 5 ದಿನಗಳ ವರೆಗೆ ಶ್ರೀ ರಾಮಯೋಗಿ ಪರಮಹಂಸರ ಪುಣ್ಯಸ್ಮರಣೆಯ ನಿಮಿತ್ಯ ಕೀರ್ತನೆ ಮತ್ತು ಅನ್ನ ಸಂತರ್ಪಣೆ ನಡೆಸಲಾಗುವುದು .ಕೊನೆಯ ದಿನ ಸುಮಂಗಳೆಯರು ಮೂಲಕ ಮೆರವಣಿಗೆ ಯಲ್ಲಿ ಕುಂಬ ಕಳಸ ಹೊತ್ತು ಶ್ರೀ ಸಿದ್ದಾರೂಢರ ಮಠದಿಂದ ರಾಮಾರೂಢರ ಮಠಕ್ಕೆ ತೆರಳಿ ಅಭಿಷೇಕ ಪ್ರಸಾದ ಸ್ವೀಕರಿಸಿ ಅಂತ್ಯಗೊಳ್ಳುವುದು.
ಇಂದು ಮೊದಲಿನಂತೆ ಇಲ್ಲ ನನ್ನೂರು "ಸ್ವಚ್ಛ ಗಾಂಧಿ ಗ್ರಾಮ" ಹಿರಿಮೆಗೆ ಪಾತ್ರವಾದದ್ದು ಎಂದು ಹೇಳಲು ಹೆಮ್ಮೆಯಿದೆ.ಇದಕ್ಕೆ ಕಾರಣ ಅಂದಿನ ಹಲಗಲಿಯ ಪಂಚಾಯತಿ ಅಧ್ಯಕ್ಷರು ಮತ್ತು ಸ್ನೇಹಿತರ ಮಿತ್ರರಾದ ಶ್ರೀ ರಮೇಶ ಜೀರಗಾಳ ಮತ್ತು ಸರ್ವ ಸದಸ್ಯರ ಸಹಕಾರ ಊರಿನ ಹಿರಿಯರ ಸಲಹೆ ಸೂಚನೆಗಳು ಮತ್ತು ಇಂದು ನಮ್ಮೂರು ಸ್ವಂತ ಗ್ರಾಮ ಪಂಚಾಯಿತಿ ಹೊಂದಿದೆ. ಊರ ವಿಶೇಷತೆ ಏನು ಅಂತಾ ಅಂದರೆ ಇಲ್ಲಿಯ ಸಿಮೆಂಟ್ ರಸ್ತೆಗಳ ಕೆಳಗಡೆ ಒಳ ಚರಂಡಿ ವ್ಯವಸ್ಥೆ ಸುತ್ತ ಮತ್ತಾ ಎಲ್ಲಿ ಇಲ್ಲಾ ಈ ಯಾವ ನಮ್ಮ ಮಹಾನಗರದಲ್ಲಿ ಇಲ್ಲ ಹಾಗೇ ವ್ಯವಸ್ಥಿತವಾಗಿ ಮಳೆ ನೀರು ಚರಂಡಿ ಮೂಲಕ  ಒಂದು ತಗ್ಗು ಪ್ರದೇಶವಾದ ಚಿಕ್ಕಕೆರೆ ಅಂದರೆ ಅಲ್ಲಿ ಚಿಕ್ಕೆರಿ ಅಂತಾ ಕರೀತಾರೆ ಅಲ್ಲಿ ಶೇಖರಿಸಿ ಅದನ್ನು ಪರಿಷ್ಕರಿಸಿ ಆ ನೀರನ್ನು ಕೃಷಿಯೇತರ ಚಟುವಟಿಕೆಗೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ.ಇಲ್ಲಿಯ ಮೂಲ ಬೆಳೆಗಳಾದ ಕಬ್ಬು,ಜೋಳ,ದ್ರಾಕ್ಷಿ,ಮೆಕ್ಕೆಜೋಳ, ಇನ್ನೂ ಮುಂತಾದ ಬೆಳೆಗಳನ್ನು ಕಾಲಕ್ಕೆ ಅನುಗುಣವಾಗಿ ಬೆಳೆಯುತ್ತಾರೆ.
ಮತ್ತೆ ಮೊದಲು ವಿದ್ಯುತ್ ಹೋದಾಗ ಊರಲ್ಲಿ ಚಿಮನಿಗಳೇ ಮೂಲಾಧಾರ ಆದರೆ ಇಂದು ನನ್ನೂರಿಗೆ 110 ಕೆಯಿಬಿ ಇದೆ.ಜೊತೆಗೆ 2019 - 20 ನೆಯ ಸಾಲಿನ ಈ ಹಳ್ಳಿಯ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಪ್ರಧಾನ ಮಂತ್ರಿ ಬಿಜಲಿ ಹರ್ ಘರ್ ಯೋಜನೆಯಡಿಯಲ್ಲಿ ಕಲ್ಪಿಸಲಾಗಿದೆ.ಆದ್ದರಿಂದ ಮೆಳ್ಳಿಗೇರಿ ಹಳ್ಳಿಯನ್ನು "ಸೌಭಾಗ್ಯ ಹಳ್ಳಿ" ಎಂದು ಘೋಷಿಸಲಾಗಿದೆ. ಈ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳು ಶ್ರೀ ನರೇಂದ್ರ ಮೋದಿ ಭಾರತ ಸರಕಾರ ಇವರಿಗೆ ನನ್ನೂರ ಸಮಸ್ತ ಗ್ರಾಮ ಪಂಚಾಯತಿ ಮತ್ತು ಸ್ನೇಹಿತರು ಜೊತೆಗೆ ಗುರು ಹಿರಿಯರ ಪರವಾಗಿ ಕೃತಜ್ಞತೆಯನ್ನೂ ಈ ಬರಹದ ಮೂಲಕ ಸಲ್ಲಿಸುವೆ.ಮೊದಲಿಗೆ ಮದುವೆ ಮುಂಜವೀ ಅಂತಾ ಪರ ಸ್ಥಳಗಳಿಗೆ ಓಡೋಡಿ ಹೋಗಬೇಕಿತ್ತು ಆದರೆ ಇಂದು ಊರಲ್ಲಿ ಸುಸಜ್ಜಿತವಾದ "ರಾಷ್ಟ್ರಕೂಟ ಭವನ" ನಿರ್ಮಿಸಿ ಊರಿಗೆ ನೆರವಾಗಿದೆ.ಕುಡಿಯುವ ನೀರಿಗಾಗಿ ಫಿಲ್ಟರ್ ನೀರಿನ ಘಟಕ ನಿರ್ಮಿಸಿ ಒಳ್ಳೆಯ ಗುಣಮಟ್ಟದ ನೀರು ನೀರು ಒದಗಿಸಿ ಕೊಟ್ಟಿದೆ ಜೊತೆಗೆ ಕೃಷ್ಣಾ ನದಿಯಿಂದ 24*7 ನಮ್ಮೂರಿಗೆ ನೀರಿನ ಸರಬರಾಜು ಮಾಡಿಸಿ ನೀರಿನ ಬವಣೆಯನ್ನು ಹೋಗಲಾಡಿಸಿ ಜೊತೆಗೆ ನೀರಿನ ತೆರಿಗೆ ಮೂಲಕ ಪಂಚಾಯತಿ ಅದನ್ನು ಬಂದ ತೆರಿಗೆಯಿಂದ ವಿವಿಧ ಯೋಜನೆಗಳನ್ನು ರೂಪಿಸಿ ಹೆಸರಾಗಿದೆ ಅದರದೇ ಆದ ಮೀಟರ್ ಅಳವಡಿಸಿ ನೀರಿನ ಪೋಲು ಆಗು ಹೋಗುಗಳ ಬಗ್ಗೆ ಪಂಚಾಯತಿ ಅರಿವು ಮೂಡಿಸುತ್ತಿದೆ.ಜೊತೆಗೆ ನನ್ನೂರಿಗೆ ಆಗು ಹೋಗುಗಳ ಬಗ್ಗೆ ಕಾಳಜಿ ಹೊಂದಿರುವ ಮಾರ್ಗದರ್ಶಿಗಳು ಮತ್ತು ಜನಪ್ರಿಯ ಶಾಸಕರು ಆದ ಶ್ರೀ ಗೋವಿಂದ ಎಂ ಕಾರಜೋಳರವರ ಕೊಡುಗೆ ನನ್ನೂರಿಗೆ ಅಮೂಲ್ಯ.ನನ್ನೂರಿಗೆ ಮುರಾರ್ಜಿ ವಸತಿ ಶಾಲೆ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಿಗೂ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಸುಸಜ್ಜಿತ ಶಿಕ್ಷಣ ಕೊಡುವಲ್ಲಿ ತನ್ನದೇ ಆದ ರೂಪುರೇಷೆ ಹಾಕಿಕೊಂಡು ವಿದ್ಯಾರ್ಥಿಗಳ ಕುಂದು ಕೊರತೆ ಪೋಷಕರೊಂದಿಗೆ ನೇರವಾಗಿ ವಿದ್ಯಾರ್ಥಿಗಳ ಆಗು ಹೋಗುಗಳ ಬಗ್ಗೆ ಚರ್ಚಿಸಲು ಶಾಲಾ ಸಮೀತಿ ಮಾಡಿಕೊಂಡ ವಾಟ್ಸಪ್ ಗ್ರೂಫ್ ಗಳು ಎಲ್ಲಾ ಶಾಲೆಗಳಿಗೆ ಮಾದರಿ.ಇನ್ನೂ ಕ್ರೀಡೆಯ ಬಗ್ಗೆ ಹೇಳಬೇಕೆಂದರೆ ಖೋಖೋ ಪಂದ್ಯಾವಳಿಗಳಲ್ಲಿ ರಾಷ್ಟ್ರಮಟ್ಟದವರೆಗೆ ಹೋಗಿ ಪ್ರತಿ ವರ್ಷ ನನ್ನೂರಿನ ಕೀರ್ತಿ ಪತಾಕೆ ಹಾರಿಸುವ ಎಲ್ಲಾ ಕ್ರೀಡಾ ಪಟುಗಳಿಗೆ ಅದರ ಮಾರ್ಗದರ್ಶಿಗಳಾದ ಮಂಜುನಾಥ ಅಮೋಜಿ ಮತ್ತು ಮಾಜಿ ಎಸ್.ಡಿ.ಎಮ್.ಸಿ. ಅಧ್ಯಕ್ಷರು ಮತ್ತು ಕರ್ನಾಟಕದ ಮಾಜಿ ಖೋಖೋ ಆಟಗಾರರು
ಇವರಿಗೆ ಕೂಡಾ ಈ ಬರಹದ ಮೂಲಕ ತುಂಬು ಹೃದಯದ ಅಭಿನಂದನೆಗಳು.ಇತ್ತಾ ದೇಶಿ ಕಲೆಯಾದ ಗಂಡು ಕಲೆ ಹಗ್ಗಜಗ್ಗಾಟದಲ್ಲಿ ನಮ್ಮೂರು ಇತಿದ ಕೈ.ಜೊತೆಗೆ ಕಲ್ಲು ಎತ್ತುವ ಸ್ಪರ್ಧೆ,ಡೊಳ್ಳು ಕುಣಿತ, ಮುಂತಾದವುಗಳು.
ಇಂದು ನಮ್ಮ ರೈತರು ಸೊಸೈಟಿ ಸಾಲಕ್ಕಾಗಿ ಬೇರೆ ಊರುಗಳಿಗೆ ತೆರಳಬೇಕಿತ್ತು.ಆದರೆ ಇಂದು ನಮೂರಲ್ಲಿಯೆ ರೈತರಿಗಾಗಿ ಸಹಕಾರಿ ಸೊಸೈಟಿ ನಿರ್ಮಿಸಿ ರೈತರ ನೆರವಾಗಿದ್ದಾರೆ.ಮೊದಲು ಸಂತೆಗೆಂದು ಮುಧೋಳ ಅರಸಿ ಹೋಗುತ್ತಿದ್ದೆವು.ಆದರೆ ಇಂದು ಪ್ರತಿ ಶುಕ್ರವಾರ ಊರಿನಲ್ಲಿ ಸಂತೆಯನ್ನು ಆರಂಬಿಸಿದ ಕೀರ್ತಿ ಪಂಚಾಯತಿಗೆ ಸಲ್ಲುತ್ತದೆ.
ಇಂದಿಗೂ ಊರಿನ ಸರ್ವತೋಮುಖ ಅಭಿವೃದ್ದಿಗಾಗಿ ದುಡಿಯುವ ಹತ್ತು ಹಲವಾರು ಹಿರಿಯರು ಅವರ ಮಾರ್ಗದರ್ಶನ ಅವರ ಪರಿಶ್ರಮದ ಫಲವಿದೆ ಅವರು ತಾನು ಎನ್ನದೇ ಊರಿನ ಹಿತಕ್ಕಾಗಿ ದುಡಿಯುವ ಎಲ್ಲ ರೈತ ಬಂಧುಗಳಿಗೆ ಮತ್ತು ಗುರುಹಿರಿಯರಿಗೆ,ಹಿತೈಷಿಗಳಿಗೆ ಜೊತೆಗೆ ಊರಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಮತ್ತು ಅಧ್ಯಕ್ಷರಿಗೆ ಮುಖ್ಯವಾಗಿ ನನ್ನುರನ್ನು ಎಲ್ಲರೂ ನೋಡುವಂತೆ ಮಾಡಿದ ನಮ್ಮೂರಿನ ಪಿಡಿಒ ರಾದ ಶ್ರೀ ಅಶೋಕ ಜನಗೌಡರಿಗೆ ನನ್ನ ವಯಕ್ತಿಕ ಮತ್ತು ಊರ ಪರವಾಗಿ ಧನ್ಯವಾದಗಳು.

*ಅಂಕಣಕಾರರು: ಅಜಯ ಮೆಟಗುಡ್ಡ*✍🏼
ನವೀನ ಹಳೆಯದು