ಮುಧೋಳ: ರೈತರು ಕೃಷಿ ಸಾಲ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಮುಖ್ಯ ಪ್ರಭಂದಕ ಸಚಿನ

ಮುಧೋಳ 19: ತಾಲೂಕಿನ ಮಾಚಕನೂರ ಗ್ರಾಮದ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಎಚ್,ಡಿ,ಎಪ್,ಸಿ ಬ್ಯಾಂಕು ಮುಂಚುಣಿಯಲ್ಲಿದ್ದು ಈಗ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಜಮೀನುಗಳ ಮೇಲೆ ಶೇಕಡಾ 13.5% ಬಡ್ಡಿದರಲ್ಲಿ ಸುಮಾರು 10 ಲಕ್ಷ ರೂ ವರೆಗೆ ಸಾಲ ನೀಡಲಾಗುತ್ತಿದು, ಈ ವಿಶೇಷ ಕೃಷಿ ಸಾಲದ ಯೋಜನೆಯನ್ನು ಸದುಪಯೋಗಪಡಿಸುಕೊಳ್ಳುವಂತೆ ಎಚ್,ಎಡಿ,ಎಪ್,ಸಿ ಮುಧೋಳ ಶಾಖೆಯ ಮುಖ್ಯ ಪ್ರಭಂದಕ ಸಚಿನ ಕಾವೇರಿ ತಿಳಿಸಿದರು.

ತಾಲೂಕಿನ ಮಾಚಕನೂರ ಗ್ರಾಮದ ಶ್ರೀ ಹೋಳೆಬಸವೆಶ್ವರ ದೇವಸ್ಥಾನದ ಮಂಗಲ ಮಂಟಪದಲ್ಲಿ ಅಯೋಜಿಸಿದ್ದ ಗ್ರಾಮೀಣ ಪ್ರದೇಶದ ರೈತರಿಗೆ ವಿಶೇಷ ಸಾಲಗಳ ಯೋಜನೆ ಎಂಬ ವಿನೂತನ ಕಾರ್ಯಕ್ರಮ ಉಧ್ಘಾಟನೆ ನೇರವೇರಿಸಿ, ಅವರು ಮಾತನಾಡಿದರು.

ರೈತರಿಗೆ ನೀಡಿದ ಬೆಳೆ ಸಾಲವನ್ನು 365 ದಿನಗಳಲ್ಲಿ ಬಡ್ಡಿ ಹಾಗೂ ಅಸಲು ಬ್ಯಾಂಕಿಗೆ ಮಾಡಿದಲ್ಲಿ ಕಡಿಮೆ ಬಡ್ಡಿ ವಿಧಿಸಲಾಗುವುದು ಹಾಗೂ ಫಸಲ ಭೀಮಾ ಯೋಜನೆ ಸೇರಿದಂತೆ ಕಿಸಾನ ಗೋಲ್ಢ ಕಾರ್ಡ ಯೋಜನೆಗಳ ಸೌಲಭ್ಯಗಳನ್ನು ನಮ್ಮ ಎಚ್.ಡಿ.ಎಪ್.ಸಿ ನಲ್ಲಿ ನೀಡಲಾಗುವದೆಂದು ಮುಖ್ಯ ಪ್ರಭಂದಕ ಸಚಿನ ಕಾವೇರಿ ತಿಳಿಸಿದರು.  

   ಕೃಷಿ ವಿಭಾಗದ ಉಪ ಪ್ರಭಂದಕ ಚಂದ್ರಶೇಖರ ಮಠದ ಮಾತನಾಡಿ, ರೈತರ ಸುಮಾರು 10 ಏಕರೆ ಜಮೀನಿನ ಮೇಲೆ ರೂ.8 ಲಕ್ಷದ ವರೆಗೆ ಸಾಲ ನೀಡಲಾಗುದು. ಅಲ್ಲದೆ ರೈತರಿಗೆ ಯಾವುದೆ ಜಾಮೀನು ಬೇಕಾಗಿಲ್ಲಾ ಹಾಗೂ ಒಂದು ವರ್ಷದ ಅವದಿಯಲ್ಲಿ ರೈತರು ಸಾಲ ಮರುಪಾವತಿಸಿದಲ್ಲಿ ಮತ್ತೆ ಬ್ಯಾಂಕ ನೀಡುವ ಸಾಲಕ್ಕೆ ಯಾವುದೆ ಕಾಗದ ಪತ್ರಗಳನ್ನು ರೈತರು ನೀಡಬೇಕಿಲ್ಲಾ. ಕಾರಣ ಎಲ್ಲಾ ಪತ್ರಗಳನ್ನು ಬ್ಯಾಂಕ ಸಿಬ್ಬಂದಿಯಿಂದ ತರಿಸಿ ಕೊಳ್ಳಲಾಗುತ್ತದೆ ಎಂದು ಉಪ ಪ್ರಭಂದಕ ಮಠದ ತಿಳಿಸಿದರು.

      ದೇಶಾದ್ಯಂತ 7500 ಶಾಖೆಗಳನ್ನು ಹೊಂದಿರುವ ಎಚ್,ಡಿ,ಎಪ್,ಸಿ ಬ್ಯಾಂಕ ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಚಿುರಿಗೆ ವಿಶೇಷ 1. ಲಕ್ಷ ರೂ. ವರೆಗೆ ಬೆಳೆ ಸಾಲ ನೀಡುವುದಾಗಿ ಹೇಳಿದರಲ್ಲದೆ, ಕೃಷಿ ಸಾಲ ಸೇರಿದಂತೆ ಸಣ್ಣ ಕೈಗಾರಿಕೆ,ವಾಹನಸಾಲ, ಗೃಹಸಾಲ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಥರ್ಿಗಳಿಗೆ ಉನ್ನತ ವ್ಯಾಸಾಂಗಕ್ಕಾಗಿ ವಿಶೇಷ ಸಾಲದ ಯೋಜನೆಗಳನ್ನು ಹೊಂದಿದ್ದು, ಮುಧೋಳ ತಾಲೂಕಿನ ಮಾಚಕನೂರ ಜನತೆ ಸಮೀಪದ ಎಚ್,ಡಿ,ಎಪ್,ಸಿ ಮುಧೋಳ ಶಾಖೆಯನ್ನು ಸಂಪಕರ್ಿಸಿ ಸಾಲದ ಸೌಲಭ್ಯಗಳನ್ನು ಪಡೆದು ಸಮಯಕ್ಕೆ ತಕ್ಕಂತೆ ಮರುಪಾವತಿಕೊಂಡು ಬ್ಯಾಂಕ ಹಾಗೂ ರೈತರ ಏಳ್ಗಿಗೆ ಸಹಕರಿಸುವಂತೆ ವಿನಂತಿಸಿಕೊಂಡರು

ಪ್ರಗತಿಪರ ರೈತರಾದ ಸದಾಶಿವ ಅಂತಾಪೂರ, ಭೀಮಪ್ಪಾ ಅಂತಾಪೂರ, ಹೊಳಬಸು ಬಿದರಿ, ಸತ್ಯಪ್ಪ ಜೋಗಿ, ಹೊಳಬಸು ಇಮ್ಮಣ್ಣವರ, ಎಸ್.ಬಿ.ಕುಂದರಗಿಮಠ, ಬಸಪ್ಪ ಇಂಗಳಗಿ, ಶ್ರೀಕಾಂತ ಪಾಟೀಲ ಹಾಗು ಸುಮಾರು ರೈತರು ಉಪಸ್ಥಿತರಿದ್ದರು. 

ಮುಧೋಳ ಎಚ್.ಡಿ.ಎಪ್.ಸಿ ಸಿಬ್ಬಂದಿ ಮಂಜನಾಥ ತೇಲಿ ಸ್ವಾಗತಿಸಿದರು,ಹನಮಂತ ವಾಲಿಕಾರ, ಕೆ,ಪಿ ಲಕ್ಷೀನಾರಾಯಣ ವೇದಿಕೆ ಮೇಲೆ ಉಪಸ್ಥಿ ತರಿದ್ದರು. ಮಹಾದೇವ ಗಲೀಬಿ ವಂದಿಸಿದರು 

ನವೀನ ಹಳೆಯದು