ಇತಿಹಾಸದ ಪುಟ ಸೇರಿದ ವಿಜಯಾ ಬ್ಯಾಂಕ್

ಕೇಂದ್ರದ ಬ್ಯಾಂಕ್‌ ವಿಲೀನ ನೀತಿಯನ್ನು ವಿರೋಧಿಸಿ ದೇನಾ, ವಿಜಯ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದ ಉದ್ಯೋಗಗಳ ಸಾಕಷ್ಟು ಹೋರಾಟ ಮಾಡಿದ್ದರು. ವಿಲೀನ ಪ್ರಕ್ರಿಯೆಗೆ ತಡೆಯೊಡ್ಡುವಂತೆ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಮಂಗಳವಾರ ಕೋರ್ಟ್​ನ ದ್ವಿಸದನ ಪೀಠ ಉದ್ಯೋಗಿಗಳ ಅರ್ಜಿಯನ್ನು ವಜಾಗೊಳಿಸಿದೆ. ಸಾವಿರಾರು ಬ್ಯಾಂಕ್ ನೌಕರರ ಹೋರಾಟಕ್ಕೆ ಕೊಡಲಿ ಏಟು ಬಿದ್ದಂತಾಗಿದೆ.

ಮುಂಬೈ: ಜಾಗತಿಕ ಬ್ಯಾಂಕಿಂಗ್ ಸ್ಪರ್ಧೆಯಲ್ಲಿ ಭಾರತ ಪೈಪೋಟಿ ನೀಡಬೇಕಿದ್ದರೆ ಸಾರ್ವಜನಿಕ ಬ್ಯಾಂಕ್​ಗಳ ವಿಲೀನ ಅನಿವಾರ್ಯ ಎಂಬ ಕೇಂದ್ರದ ಧೋರಣೆಯಡಿ ದೇನಾ ಮತ್ತು ವಿಜಯ ಬ್ಯಾಂಕ್​ಗಳು ಎಪ್ರಿಲ್ 1 ರಂದು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಗಲಿವೆ.

ರೈತರ ಹಾಗೂ ಜನಸಾಮಾನ್ಯರ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಎ.ಬಿ. ಶೆಟ್ಟಿ ಎಂಬುವವರು1931ರ ಅಕ್ಟೋಬರ್​ 23ರ ವಿಜಯದಶಮಿಯಂದು 'ವಿಜಯ' ಬ್ಯಾಂಕನ್ನು ಮಂಗಳೂರಿನಲ್ಲಿ ಸ್ಥಾಪಿಸಿದ್ದರು.

ಹಣಕಾಸಿನ ಸ್ಥಿತಿಗತಿ, ದಕ್ಷ ಕಾರ್ಯಕ್ಷಮತೆ, ಸಮರ್ಪಕ ಆಡಳಿತ, ಗ್ರಾಮೀಣ ಹಣಕಾಸು ವಹಿವಾಟಿನ ವೃದ್ಧಿ ಸೇರಿದಂತೆ ಹಲವು ಸೇವೆಗಳ ಅನನ್ಯತೆಯೊಂದಿಗೆ ರಾಜ್ಯದ ಗಡಿದಾಟಿ ದೇಶಾದ್ಯಂತ ಶಾಖೆಗಳನ್ನು ಹೊಂದಿತ್ತು.

ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್​ನ ಎಲ್ಲ ಶಾಖೆಗಳು 2019ರ ಏಪ್ರಿಲ್ 1ರಿಂದ ಬ್ಯಾಂಕ್ ಆಫ್ ಬರೋಡಾದ ಶಾಖೆಗಳ ಜತೆಗೆ ಕಾರ್ಯನಿರ್ವಹಿಸುತ್ತವೆ. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್​ ಠೇವಣಿದಾರರು ಸೇರಿದಂತೆ ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಒಂದೇ ಸೂರಿನಡಿಯ ಬ್ಯಾಂಕ್​ ಗ್ರಾಹಕರಾಗಲಿದ್ದಾರೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ತಿಳಿಸಿದೆ.

ಈ ತ್ರಿವಳಿ ಬ್ಯಾಂಕ್​ಗಳ ವಿಲೀನದಿಂದ ಬ್ಯಾಂಕ್ ಆಫ್ ಬರೋಡಾ ದೇಶದ 3ನೇ ಅತಿದೊಡ್ಡ ಬ್ಯಾಂಕ ಆಗಲಿದೆ. ಇದಕ್ಕೆ ಸರ್ಕಾರದಿಂದ ₹ 5,042 ಕೋಟಿ ಹಣಕಾಸಿನ ನೆರವು ಹರಿದು ಬರಲಿದೆ ಎಂದು ಹಣಕಾಸು ಸಚಿವಾಲಯ ವಿಲೀನದ ಹಿಂದಿನ ಉದ್ದೇಶ ಸ್ಪಷ್ಟಪಡಿಸಿದೆ.

Vijaya Bank
ವಿಜಯ ಬ್ಯಾಂಕ್

ಮಾ.31 ಭಾನುವಾರ ಟ್ಯಾಕ್ಸ್‌ಗೆ ಸಂಬಂಧಿಸಿದ ಪ್ರಕ್ರಿಯೆ ಮಾತ್ರ ನಡೆಯಲಿರುವುದರಿಂದ ಮಾ.30 ಶನಿವಾರದಂದೇ ಬ್ಯಾಂಕ್‌ನ ಕೊನೆಯ ಕೆಲಸದ ದಿನವಾಗುತ್ತು. ಏ.1ರಿಂದ ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನಗೊಳ್ಳಲಿದ್ದು, ಇಂದಿಗೆ 'ಸಿಂಗಣ್ಣ'ನ ಸೇವೆ ಸಹ ಕೊನೆಯಾಯಿತು.

ಅಗ್ರ ಶ್ರೇಣಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ವಿಜಯ ಬ್ಯಾಂಕ್‌ ದೇಶದಲ್ಲಿ ಸುಮಾರು 2,129 ಶಾಖೆgಳನ್ನು ಹೊಂದಿದೆ. ಇದುವರೆಗೂ ₹ 2.79 ಲಕ್ಷ ಕೋಟಿ ವ್ಯವಹಾರ ದಾಖಲಿಸಿದೆ. 15,874 ನೌಕರರು ಇದ್ದು, ಎನ್‌ಪಿಎ ಪ್ರಮಾಣ ಶೇ.5.4 ಆಗಿದೆ.

ದೇನಾ ಬ್ಯಾಂಕ್‌ 1.72 ಲಕ್ಷ ಕೋಟಿ ವ್ಯವಹಾರ, 1,858 ಶಾಖೆ, 13,440 ನೌಕರರನ್ನು ಹೊಂದಿದೆ. ಬ್ಯಾಂಕ್‌ನ ಎನ್‌ಪಿಎ ಪ್ರಮಾಣ ಶೇ.11.04 ಆಗಿದೆ. ಒಂದು ಕಡೆ ನಷ್ಟದಲ್ಲಿರುವ ದೇನಾ ಬ್ಯಾಂಕ್‌, ಮತ್ತೊಂದು ಕಡೆ ತನಗಿಂತ ಉತ್ತಮ ಹಣಕಾಸು ಸ್ಥಿತಿ ಹೊಂದಿರುವ ಬ್ಯಾಂಕ್‌ ಆಫ್‌ ಬರೋಡಾ ನಡುವೆ ಕನ್ನಡಿಗರ ವಿಜಯ ಬ್ಯಾಂಕ್ ಇತಿಹಾಸ ಪುಟ ಸೇರಿದಂತಾಗಿದೆ.

ನವೀನ ಹಳೆಯದು