ಪೊಲೀಸಪ್ಪನ ವ್ಯಾಟ್ಸಪ್‌ ಕೃಷಿ

ಲಾಭದಾಯಕ ಬೆಳೆಗಳ ವಿವರ, ಕೃಷಿ ಕ್ಷೇತ್ರದ ನೂತನ ಆವಿಷ್ಕಾರ, ಮಾರುಕಟ್ಟೆಯ ಬೆಲೆ ಏರಿಳಿತದ ಸುದ್ದಿಯಂಥ ವಿವರಗಳು ಎಲ್ಲ ರೈತರಿಗೂ ಗೊತ್ತಾಗಬೇಕು ಎಂಬುದು ಬಸವನ ಗೌಡರ ಆಸೆ. ಅದಕ್ಕೆಂದೇ ಅವರು ವ್ಯಾಟ್ಸಪ್‌ ಗುಂಪವನ್ನು ರಚಿಸಿಕೊಂಡಿದ್ದಾರೆ. ವ್ಯಾಟ್ಸಪ್‌ ಸಂದೇಶದ ಮೂಲಕ ಸಾವಿರಾರು ರೈತರಿಗೆ ಕೃಷಿ ರಂಗದ ಸುದ್ದಿಗಳು ತಲುಪುವಂತೆ ಮಾಡಿದ್ದಾರೆ. 

"ಕೃಷಿಯ ಯಶಸ್ಸು ರೈತ ಅಳವಡಿಸಿಕೊಳ್ಳುವ ತಂತ್ರಜಾnನವನ್ನು ಅವಲಂಭಿಸಿರುತ್ತದೆ. ಹೀಗಾಗಿ, ವಿಜ್ಞಾನಿಗಳ ಸಲಹೆಯನ್ನು ಪಡೆದು ಕೃಷಿಯಲ್ಲಿ ಗೆಲ್ಲಬೇಕು. ಕಳೆದ ಐದು ವರ್ಷಗಳಿಂದ ಅದನ್ನೇ ಮಾಡುತ್ತಿದ್ದೇನೆ' ಎನ್ನುತ್ತಾ ತಮ್ಮ ಕೃಷಿ ತಾಕು ಸುತ್ತಿಸಿದರು ಬಸನಗೌಡ ಪೊಲೀಸ್‌ ಪಾಟೀಲ್‌.

ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಬಸನಗೌಡ ಪೊಲೀಸ್‌ ಪಾಟೀಲ್‌ ಅವರಿಗೆ 29 ಎಕರೆ ಜಮೀನಿದೆ. ಕೃಷಿ ಕೆಲಸದೊಂದಿಗೆ ಸಾವಿರಾರು ರೈತರಿಗೆ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಕೊಡಿಸುವ ಕೆಲಸವನ್ನೂ ಬಸನಗೌಡರು ಮಾಡುತ್ತಿದ್ದಾರೆ.

ಏನೇನಿದೆ?

29  ಎಕರೆಯ ಪೈಕಿ ಹದಿನೈದು ಎಕರೆಯಲ್ಲಿ ಕಬ್ಬಿದೆ. ಮುಂಗಾರಿನಲ್ಲಿ ಈರುಳ್ಳಿ, ಗೋವಿನ ಜೋಳ ಬೆಳೆಯುತ್ತಾರೆ. ಈ ಬೆಳೆ ಕಟಾವಾಗುತ್ತಿದ್ದಂತೆಯೇ ಕಡಲೆ, ಗೋದಿ ಬಿತ್ತುತ್ತಾರೆ. ಎರಡು ಎಕರೆಯಲ್ಲಿ ಮೆಣಸಿನ ಕೃಷಿ ನಡೆಸುತ್ತಾರೆ. ತರಕಾರಿ ಕೃಷಿಗೆಂದೇ ಎರಡು ಎಕರೆ ಜಮೀನು ಉಳಿಸಿಕೊಂಡಿದ್ದಾರೆ. ಬದನೆ, ಮೆಣಸು, ಟೊಮೆಟೋ, ಚೌಳಿ, ಹೀರೆ... ಹೀಗೆ, ಯಾವ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇರುತ್ತದೆಯೋ ಆ ಬೆಳೆ ತಮ್ಮ ಹೊಲದಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಹಬ್ಬದ ಸಂದರ್ಭದಲ್ಲಿ ಇಳುವರಿ ಸಿಗುವಂತೆ ಚಂಡು ಹೂವು, ಸೇವಂತಿಗೆ ಕೃಷಿಯನ್ನು ಮಾಡುತ್ತಾರೆ. ತರಕಾರಿ ಹಾಗೂ ಹೂವಿನ ಬೇಸಾಯ ಕಡಿಮೆ ಅವಧಿಯಲ್ಲಿ ಹಣ ತಂದುಕೊಡುವ ಬೆಳೆ. ಹಾಗಾಗಿ, ರೈತರು ಕನಿಷ್ಠ ಭೂಮಿಯಲ್ಲಿಯಾದರೂ ಈ ಬೆಳೆ ಬೆಳೆಯಬೇಕು ಎನ್ನುತ್ತಾರೆ. ಕಳೆದ ವರ್ಷ ತರಕಾರಿಯಿಂದಲೇ ವಾರ್ಷಿಕ ಮೂರು ಲಕ್ಷ ರೂ.ಗಳನ್ನೂ,  ಹೂವಿನ ಬೆಳೆಯಿಂದ ಎಂಭತ್ತು ಸಾವಿರ ರೂ. ಆದಾಯವನ್ನೂ ಗಳಿಸಿದ್ದಾರೆ.

ಕೃಷಿ ಗ್ರಂಥಾಲಯ ಸ್ಥಾಪನೆ

ಬಸನಗೌಡ ಪಾಟೀಲ್‌,  ಹತ್ತು ವರ್ಷಗಳ ಹಿಂದೆಯೇ 'ಕೃಷಿ ಗ್ರಂಥಾಲಯ'ವೊಂದನ್ನು ಸ್ಥಾಪಿಸಿದ್ದಾರೆ. ತನ್ಮೂಲಕ ಸಾಗುವಳಿಯ ಮಾಹಿತಿ ಹಂಚುತ್ತಿದ್ದಾರೆ. ಒಂದೂವರೆ ಸಾವಿರಕ್ಕೂ ಅಧಿಕ ಮ್ಯಾಗ್‌ಜಿನ್‌ಗಳು ಇವರಲ್ಲಿದೆ. ಪುಸ್ತಕ ಓದುವ ಆಸಕ್ತ ಕೃಷಿಕರಿಗೆ ಉಚಿತವಾಗಿ ಹಂಚುವುದೂ ಇದೆ.

ದೂರದೂರಿನ ರೈತರು ಕೃಷಿ ಮಾಹಿತಿಯಿಂದ ವಂಚಿತರಾಗಬಾರದು ಎಂದು ನಿರ್ಧರಿಸಿದ ಪೊಲೀಸ್‌ ಪಾಟೀಲ್‌ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ "ಅಗ್ರಿ ಸಲ್ಯೂಶನ್‌' ಎನ್ನುವ ವ್ಯಾಟ್ಸಪ್‌ ಗುಂಪು ರಚಿಸಿಕೊಂಡು ರೈತರಿಗೆ ಮಾಹಿತಿ ಹಂಚುತ್ತಿದ್ದಾರೆ.

ಕೃಷಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಉದ್ದೇಶದಿಂದ ರಚಿತಗೊಂಡ ಈ ಗುಂಪಿನಲ್ಲಿ ನೂರೈವತ್ತಕ್ಕೂ ಅಧಿಕ ರೈತರಿದ್ದಾರೆ. ಒಟ್ಟು 256 ಸದಸ್ಯರಲ್ಲಿ  ಕೃಷಿ ವಿಜ್ಞಾನಿಗಳು, ತಜ್ಞರು, ಸರ್ಕಾರದ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನೂ ಸೇರಿಸಿದ್ದಾರೆ.  ಕೇವಲ ಗುಂಪಿನ ಸದಸ್ಯರಿಗೆ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಹೊಲದಲ್ಲಿ ತನ್ನಷ್ಟಕ್ಕೆ ತಾನು ಗೇಯೆ¾ಯಲ್ಲಿ ತೊಡಗಿದ, ಯಾರ ಸಂಪರ್ಕಕ್ಕೂ ಸಿಗದ ಸಹಸ್ರಾರು ರೈತರಿಗೆ ಸಹಜವಾಗಿಯೇ ಸಮಸ್ಯೆಗಳು ಕಾಡುತ್ತಿರುತ್ತದೆ. 

ಬೆಳೆವಾರು ಗುಂಪುಗಳು

ಬೆಳೆವಾರು ಗುಂಪುಗಳನ್ನು ರಚಿಸಿಕೊಂಡು ಆಯಾ ಬೆಳೆ ಬೆಳೆಯುವ ರೈತರನ್ನು ಸಂಬಂಧಿಸಿದ ಗುಂಪಿಗೆ ಸೇರಿಸುತ್ತಿದ್ದಾರೆ. ಹೆಚ್ಚಿನ ರೈತರಿಗೆ ಮಾಹಿತಿ ವಿನಿಮಯವಾಗಬೇಕೆಂದು ನಿರ್ಧರಿಸಿದ ಗೌಡರು ಪಪ್ಪಾಯ, ದ್ರಾಕ್ಷಿ, ದಾಳಿಂಬೆ, ಬಾಳೆ, ರೇಷ್ಮೆ, ಹತ್ತಿ, ಮೆಣಸು, ಟೊಮೆಟೊ, ಕಬ್ಬು, ಕುಂಬಳ ಜಾತಿಯ ಬಳ್ಳಿಗಳು, ಔಷಧೀಯ ಸಸ್ಯಗಳು, ದ್ವಿದಳ ಧಾನ್ಯಗಳು, ಅರಿಶಿನ, ತೆಂಗು, ಹೈನುಗಾರಿಕೆ, ಕೃಷಿ ಉಪಕರಣಗಳು ಹೀಗೆ ಹದಿನೈದಕ್ಕೂ ಅಧಿಕ ಗುಂಪುಗಳನ್ನು ರಚಿಸಿಕೊಂಡಿದ್ದಾರೆ.ಆಯಾ ಗುಂಪಿನಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದ ವಿಜ್ಞಾನಿಗಳನ್ನು ಸೇರಿಸಿದ್ದು ರೈತರ ಸಮಸ್ಯೆಗೆ ಸ್ಪಂದನೆ ದೊರೆಯುತ್ತಿದೆ. ಬೆಳೆವಾರು ಗುಂಪಿನ ಪ್ರತಿಯೊಂದು ಗುಂಪಿನಲ್ಲಿ ನೂರೈವತ್ತಕ್ಕೂ ಅಧಿಕರೈತರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಯಾವ್ಯಾವ ವಿಷಯಗಳು ಹಂಚಿಕೆಯಾಗುತ್ತವೆ?

ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಮಾತ್ರವಲ್ಲ, ಕೃಷಿ ಆಗು ಹೋಗುಗಳು ಏನೇ ಇದ್ದರೂ ಗುಂಪಿನಲ್ಲಿ ನೋಡಲು, ಓದಲು ಸಿಗುತ್ತದೆ.  ಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ರೈತರಿಗೆ ಸಲಹೆ ಮತ್ತುಕೃಷಿ ರಂಗಕಾರ್ಯಕ್ರಮದಧ್ವನಿ ಮುದ್ರಣಗಳು, ಮೈಸೂರಿನ ಆಲೂಗಡ್ಡೆ, ತರಕಾರಿ, ಈರುಳ್ಳಿ ಮಾರುಕಟ್ಟೆ, ಬ್ಯಾಡಗಿಯ ಮೆಣಸು ಮಾರುಕಟ್ಟೆ ಹೀಗೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿಯಾವ ಬೆಳೆಗೆ ಯಾವ ದರವಿದೆ ಎನ್ನುವ ನಿತ್ಯದ ಮಾಹಿತಿಗಳು ಈ ಗುಂಪಿನಲ್ಲಿಅಪ್‌ಡೇಟ್‌ಆಗುತ್ತವೆ. ಗುಂಪಿನ ನಿರ್ವಹಣೆಯನ್ನು ಒಬ್ಬರಿಂದ ಮಾಡುವುದು ಅಸಾಧ್ಯ. ಹೀಗಾಗಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ರವಿಕುಮಾರ್‌ ಜಿ. ಎಚ್‌. ಅವರು ಬಸನಗೌಡ ಅವರ ಕಾಯಕದಲ್ಲಿ ಕೈಜೋಡಿಸಿದ್ದಾರೆ. ಇವರು ಕೃಷಿ ಸಂಬಂಧಿತಎಲ್ಲಾ ಗುಂಪಿನ ನಿರ್ವಹಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.


ನವೀನ ಹಳೆಯದು