ಮುಧೋಳದ ಮಂಜುನಾಥ್ ಜತೆ ಪ್ರಧಾನಿ ಸಂವಾದ


ವೆಂಕಟೇಶ ಗುಡೆಪ್ಪನವರ ಮುಧೋಳ ‘ನಮಸ್ತೆ ಮಂಜುನಾಥ……ನೀವು ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಲ್ಲಿ ಸಾಲ ಪಡೆದು ಯಶಸ್ವಿ ಆಗಿದ್ದೀರಿ. ಈ ಬಗ್ಗೆ ದೇಶದ ಜನತೆಗೆ ಏನು ಹೇಳುತ್ತೀರಿ…?’

ಇದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಮಧ್ಯಾಹ್ನ ಮುದ್ರಾ ಯೋಜನೆ ಫಲಾನುಭವಿಗಳ ಜತೆ ನಡೆಸಿದ ವಿಡಿಯೋ ಕಾನ್ಪರೆನ್ಸ್ ವೇಳೆ ಮುಧೋಳದ ಯುವ ಉದ್ಯಮಿ ಮಂಜುನಾಥ ಶಿವಾಜಿರಾವ್ ಖಮತಕರ (ಶ್ರೀಸಾಯಿನಾಥ ಎಂಟರ್​ಪ್ರೖೆಸಸ್)ಗೆ ಕೇಳಿದ ಪ್ರಶ್ನೆ.

ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಳಿತು ಪ್ರಧಾನಿ ಮಾತು ಕೇಳಿ ಪುಳಕಿತರಾದ ಮಂಜುನಾಥ್, ಮುದ್ರಾ ಯೋಜನೆಯಡಿ 13 ಲಕ್ಷ ಸಾಲ ಪಡೆದು ಮೊಬೈಲ್ ಅಂಗಡಿ ಆರಂಭಿಸಿ ಬಹುತೇಕ ಸಾಲ ತೀರಿಸಿದ್ದನ್ನು ಅವರಿಗೆ ವಿವರಿಸಿದರು. ‘ನಾಲ್ಕು ಜನರಿಗೆ ಉದ್ಯೋಗ ನೀಡಿರುವೆ. ನಾನು ಸ್ವಂತ ಉದ್ಯೋಗ ಮಾಡುವುದಕ್ಕಾಗಿ ಗದಗದಿಂದ ಮುಧೋಳಕ್ಕೆ ಬಂದಿರುವೆ. ತಂದೆ ಸರ್ಕಾರಿ ನೌಕರರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಆಗ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ನಿಮ್ಮ ಸಾಧನೆ ಎಲ್ಲ ಯುವ ಉದ್ಯಮಿಗಳಿಗೆ ಮಾರ್ಗದರ್ಶನವಾಗಲಿ. ತಂದೆ ಸರ್ಕಾರಿ ನೌಕರರಾಗಿದ್ದರೂ ಸರ್ಕಾರಿ ನೌಕರಿಗೆ ಅಲೆಯದೆ ಸ್ವ ಉದ್ಯೋಗ ಕೈಗೊಂಡಿದ್ದು ಶ್ಲಾಘನೀಯ. ಭಾರತದ ಎಲ್ಲ ಯುವ ಜನರು ನಿಮ್ಮಂತಾಗಲಿ ಎಂದು ಹಾರೈಸಿದರು.


-ಠಿ;6 ಲಕ್ಷ ಕೋಟಿ ಸಾಲ ವಿತರಣೆ

ನವದೆಹಲಿ: ಮಧ್ಯವರ್ತಿಗಳಿಲ್ಲದೇ ಬಡವರ ಉದ್ಯಮದ ಕನಸಿಗೂ ಎನ್​ಡಿಎ ಸರ್ಕಾರ ಮುದ್ರಾ ಯೋಜನೆ ಮೂಲಕ 6 ಲಕ್ಷ ಕೋಟಿ ರೂ ಸಾಲ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ಮುದ್ರಾ ಯೋಜನೆ ಫಲಾನುಭವಿಗಳ ಜತೆ ಮಂಗಳವಾರ ಸಂವಾದ ನಡೆಸಿದ ಮೋದಿ, ದೇಶಾದ್ಯಂತ ಸುಮಾರು 12 ಕೋಟಿ ಜನರಿಗೆ 6 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ. 12 ಕೋಟಿ ಫಲಾನುಭವಿಗಳಲ್ಲಿ ಶೇ.28 ಜನ ಎಂದರೆ 3.28 ಫಲಾನುಭವಿಗಳು ಮೊದಲ ಬಾರಿಗೆ ಉದ್ಯಮಕ್ಕೆ ಕಾಲಿಟ್ಟವರು. ಶೇ.74 ಫಲಾನುಭವಿಗಳು ಅಥವಾ 9 ಕೋಟಿ ಫಲಾನುಭವಿಗಳು ಮಹಿಳೆಯರಾಗಿದ್ದು, ಅವರಲ್ಲಿ ಶೇ.55 ಫಲಾನುಭವಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರು.

ಒಂದು ಕಾಲದಲ್ಲಿ ಕೇಂದ್ರದ ಹಣಕಾಸು ಸಚಿವರು ಕೇವಲ ಕಾರ್ಪೆರೇಟ್ ಕಂಪನಿಗಳಿಗೆ ಸಾಲ ಕೊಡಿಸುವುದರಲ್ಲಿ ನಿರತಾಗಿದ್ದರು. ಆದರೆ ಈ ಸರ್ಕಾರವು ಯಾವುದೇ ತಾಪತ್ರಯವಿಲ್ಲದೇ ಸಾಮಾನ್ಯ ಜನರಿಗೂ ಸಾಲ ಕೊಡಿಸುತ್ತಿದೆ ಎಂದು ಹೇಳಿದರು. ಸಂವಾದದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಆಸ್ಸಾಂ, ಹಿಮಾಚಲಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ಫಲಾನುಭವಿಗಳ ಜತೆ ಮೋದಿ ಮಾತನಾಡಿದರು. -ಪಿಟಿಐ


ಹಣ ಇಲ್ಲದೆ ಸಿಂಡಿಕೇಟ್ ಬ್ಯಾಂಕ್​ನಲ್ಲಿದ್ದ -ಠಿ;20,000 ಹಿಂಪಡೆಯುವಾಗ ಬ್ಯಾಂಕ್​ನವರು -ಠಿ; 5ಲಕ್ಷ ಸಾಲ ಕೊಟ್ಟರು. ಅದನ್ನು ಮರುಪಾವತಿ ಮಾಡಿದಾಗ ಮತ್ತೆ -ಠಿ; 8 ಲಕ್ಷ, ನಂತರ -ಠಿ; 13 ಲಕ್ಷ ನೀಡಿದರು. ಯಾವುದೇ ಭದ್ರತೆ ಪಡೆಯದೆ ಐಟಿ ರಿಟರ್ನ್ಸ್ ದಾಖಲೆ ಪಡೆದು ನನಗೆ ಸಾಲ ನೀಡಿದ್ದಾರೆ. 20 ವರ್ಷಗಳ ಹಿಂದೆ ಮುಧೋಳಕ್ಕೆ ಬಂದು ಈಗ ಯಶಸ್ವಿ ಉದ್ಯಮಿಯಾಗಿದ್ದೇನೆ.
| ಮಂಜುನಾಥ ಶಿವಾಜಿರಾವ್ ಖಮತಕರ


ನವೀನ ಹಳೆಯದು