ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಇನ್ನಿಲ್ಲ....


ಬಾಲಿವುಡ್ ನ ಎವರ್ ಗ್ರೀನ್ ಬ್ಯೂಟಿ, ನಟಿ ಶ್ರೀದೇವಿ ತೀರಿಕೊಂಡಿದ್ದಾರೆ.. ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ನಟಿ ಅಂದ್ರೆ ಅದು ಶ್ರೀದೇವಿ ಅವರು… ಲೇಡಿ ಸೂಪರ್ ಸ್ಟಾರ್ ಆಗಿ ಹೆಸರು ಮಾಡಿದ್ದ ನಟಿ ಈಕೆ…

ದುಬೈನಲ್ಲಿ ಮದುವೆಗೆ ತೆರೆಳಿದ್ದ ಸಮಯ ತನ್ನ ಕುಟುಂಬದ ಮುಂದೆಯೇ ಕುಸಿದು ಬಿದ್ದು ತನ್ನ ಮಕ್ಕಳ ಮುಂದೆಯೇ ಜೀವ ಬಿಟ್ಟಿದ್ದಾರೆ… ಮೋಹಕ ನಟಿಯ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ..


ಈ ಹಿಂದಿನಿಂದಲೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ನಟಿ ಶ್ರೀದೇವಿ ಅವರು ಚಿಕಿತ್ಸೆಯನ್ನ ಪಡೆಯುತ್ತಿದ್ದರು… ನಿನ್ನೆ ಮದುವೆ ಕಾರ್ಯಕ್ರಮವೊಂದಕ್ಕೆ ಕುಟುಂಬದೊಂದಿಗೆ ತೆರಳಿದ್ದ ಈ ನಟಿ ಸ್ಥಳದಲ್ಲಿ ಕುಸಿದು ಬಿದಿದ್ದಾರೆ… ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ.. ಇವರಿಗೆ 54 ವರ್ಷವಾಗಿತ್ತು.


ಸದ್ಯಕ್ಕೆ ಅವರ ಮೃತ ದೇಹವನ್ನ ದುಬೈನಿಂದ ಮುಂಬೈನ ಅಂಧೇರಿಗೆ ಕರೆ ತರಲು ತಯಾರಿಯನ್ನ ಮಾಡಿಕೊಳ್ಳಲಾಗ್ತಿದೆ.. ಆನಂತರ ಅಂತಿಮ ಸಂಸ್ಕಾರದ ಬಗ್ಗೆ ಚರ್ಚೆ ನಡೆಯಲಿದೆ… ಶ್ರೀದೇವಿ ಅವರ ಅಗಲಿಕೆಗೆ ಪ್ರಧಾನ ಮಂತ್ರಿಯಿಂದ ಹಿಡಿದು ಬಾಲಿವುಡ್ ಚಿತ್ರರಂಗದ ವರೆಗೆ ಸಂತಾಪ ಸೂಚಿಸಿದ್ದಾರೆ.


ಮಗಳನ್ನ ಈಗಷ್ಟೇ ಚಿತ್ರರಂಗಕ್ಕೆ ಪರಿಚಯ ಮಾಡ್ತಿದ್ದು, ಜಾನ್ಹವಿ ಕಪೂರ್ ನಾಯಕಿಯಾಗಿ ಸಿನಿಮಾಗೆ ಸೈನ್ ಮಾಡಿದ್ದು, ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.. 


ಬೋನಿಕಪೂರ್ ಹಿಂದಿ ಚಿತ್ರರಂಗದ ಮಹಾನ್ ನಿರ್ಮಾಪಕರಾಗಿದ್ದು, ಮತ್ತೊಬ್ಬ ಮಗಳು ಸಹ ಸದ್ಯದಲ್ಲೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ದವಾಗಿದ್ರು. ಮಕ್ಕಳ ಸಿನಿಮಾರಂಗ ಪ್ರವೇಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದ ಶ್ರೀದೇವಿ ತಾವೇ ಚಿತ್ರಕಥೆಯನ್ನ ಫೈನಲ್ ಮಾಡ್ತಿದ್ರು…

ನವೀನ ಹಳೆಯದು