ಲೋಪದೋಷಗಳ ನಡುವೆ ರನ್ನ ವೈಭವಕ್ಕೆ ಇಂದು ತೆರೆ


ರನ್ನ ವೈಭಬಕ್ಕೆ ಇಂದು ಅದ್ದೂರಿ ತೆರೆ ನಾಟಕ, ಸಾಹಿತ್ಯ, ಚರ್ಚೆ, ಡೊಳ್ಳು ಕುಣಿತ, ಕರಡಿ ಮಜಲು, ಜಾನಪದ ಗೀತೆಗಳ ಮೂಲಕ ರನ್ನನ ಗತ ವೈಭವ ಮತ್ತು ರನ್ನ ನಾಡಿನ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಲಾಯಿತು. ಕಳೆದ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರನ್ನ ವೈಭವವನ್ನು ಈ ವರ್ಷ ಹಣದ ಕೊರತೆಯಿದ್ದರು ಆಚರಿಸಲಾಯಿತು. ಕಳೆದ ಮೂರು ವರ್ಷಗಳಲ್ಲಿ ಪ್ರತಿ ವರ್ಷ ರನ್ನ ವೈಭವಕ್ಕೆ ಅಂತ 30ಲಕ್ಷ ರೂ ಗಳನ್ನು ಸರ್ಕಾರ ತೆಗೆದಿಟ್ಟಿತ್ತು ಅದರ 3 ವರ್ಷದ ಒಟ್ಟು ಮೊತ್ತ 90 ಲಕ್ಷ ಮತ್ತು ಇನ್ನುಳಿದ 60 ಲಕ್ಷ ರೂಪಾಯಿಗಳನ್ನು ಇತರೆ ಕಡೆ ಸಂಗ್ರಹಿಸಿ ಒಟ್ಟು 1.5 ಕೋಟಿ ರೂಪಾಯಿಗಳನ್ನು ವ್ಯಯಿಸಿ ವೈಭವವನ್ನು ಮಾಡಲಾಯಿತು.


ನೆನೆಗುದಿಗೆ ಬಿದ್ದ ರನ್ನ ವೈಭವವನ್ನು ಮತ್ತೇ ಪ್ರಾರಂಭಿಸಿದ ಜಿಲ್ಲಾಧಿಕಾರಿ ಮತ್ತು ಮಂತ್ರಿಗಳಿಗೆ ಧನ್ಯವಾದಗಳು


ರನ್ನ ವೈಭವದಲ್ಲಿ ಹಲವಾರು ದೋಷಗಳು ಕಂಡುಬಂದಿವೆ ಅದರಲ್ಲಿ ಮುಖ್ಯವಾದದ್ದು ಕಲಾವಿದರಿಗೆ ತೋರಿದ ಅಗೌರವ ಕಾರ್ಯಕರ್ಮದಲ್ಲಿ ಭಾಗವಹಿಸಲು ಅಧಿಕೃತ ಆಮಂತ್ರಣ ನೀಡಿದ ಜಿಲ್ಲಾಡಳಿತ 10 ಜನ ಇರೋ ಒಂದು ತಂಡಕ್ಕೆ ಕೇವಲ ₹6000 ನೀಡಿ ಕೈ ತೊಳೆದುಕೊಂಡಿದೆ ಹೋಗಲಿ ದುಡ್ಡು ಮುಖ್ಯ ಅಲ್ಲ ಅಂತ ಅವರ ಕಲಾಸೇವೆಗೆ ಒಂದು ನೆನಪಿನ ಕಾಣಿಕೆಯನ್ನಾದರು ನೀಡಬಹುದಿತ್ತು ಆ ಸೌಜನ್ಯವನ್ನು ಸಹ ಸರ್ಕಾರ ತೋರಿಲ್ಲ. ಈ ಅಗೌರವ ವಿಷಯವನ್ನು ಸ್ವತಃ ಕಲಾವಿದರೆ ಸ್ವಯಂ ಪ್ರೇರಿತರಾಗಿ ನಮ್ಮ ಮುಧೋಳ ದೊಂದಿಗೆ ಹಂಚಿಕೊಂಡಿದ್ದಾರೆ.



ಅಷ್ಟೇ ಅಲ್ಲದೆ ರನ್ನ ವೈಭವದ ಕೊನೆಯ ದಿನ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಬರುತ್ತಿರೋದು ಸರಿ ಅಲ್ಲ ಅಂಥ ಆನ್ನೋದು ಸಾಮಾಜಿಕ ಮಾಧ್ಯಮಗಳಲ್ಲಿ ಬರ್ತಿರೋ ಅಭಿಪ್ರಾಯ


ಇದನ್ನೆಲ್ಲಾ ಗಮನಿಸಿದಾಗ ರನ್ನ ವೈಭವವನ್ನು ತರಾತುರಿಯಲ್ಲಿ ಚುನಾವನೆಗೆ ಪೂರ್ವಕವಾಗಿ ಮಾಡಿದಂತೆ ಕಾಣುತ್ತದೆ...ಅದೇನೇ ಇದ್ದರೂ. ನಾಡಿನ ಸಾಂಸ್ಕೃತಿಕ ವೈಭವಗಳಲ್ಲಿ ರಾಜಕೀಯ ಬೇಡ ಹಾಗೂ 

ವೈಭವ ದ ಜವಾಬ್ದಾರಿ ಹೊತ್ತ ಜಿಲ್ಲಾಧಿಕಾರಿಗಳು ಮತ್ತು ಮಂತ್ರಿಗಳು ಭಾಗವಹಿಸಿದ ಎಲ್ಲ ಕಲಾವಿದರಿಗೂ ನ್ಯಾಯ ಒದಗಿಸಿ. ಯಾಕಂದ್ರೆ ಅದೆಷ್ಟೋ ಕಲಾವಿದ್ರು ರಾಜ್ಯದ ವಿವಿಧೆಡೆಯಿಂದ ಬಂದಿದ್ದಾರೆ ಅವರ ಮುಂದೆ ಮುಧೋಳ ಜನತೆಗೆ ಮುಜುಗರ ಆಗಬಾರದು ಅನ್ನೋದು ನಮ್ಮ ಆಶಯ.
ನವೀನ ಹಳೆಯದು