ಬಿಸಿಸಿಐಗೆ ಐಸಿಸಿಯಿಂದ 125 ಕೋಟಿ ಶಾಕ್..!

ದುಬೈ: ತೆರಿಗೆ ವಿನಾಯ್ತಿ ಲಭ್ಯವಾಗದಿದ್ದರೆ, 2021ರ ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರ ಭೀತಿ ಎದುರಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಐಸಿಸಿ ಮತ್ತೊಂದು ಶಾಕ್ ನೀಡಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
2016ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆದಿತ್ತು. ಈ ವೇಳೆ ಪ್ರಸಾರದ ಹಕ್ಕು ಪಡೆದಿದ್ದ ಸ್ಟಾರ್ ನೆಟ್‌ವರ್ಕ್ ವಾಹಿನಿ, ಟಿಡಿಎಸ್ (ಟ್ಯಾಕ್ಸ್ ಡಿಡೆಕ್ಟೆಡ್ ಸೋರ್ಸ್) ಮೂಲಕ ಭಾರತ ಸರ್ಕಾರಕ್ಕೆ 125  ಕೋಟಿ ಪಾವತಿಸಿತ್ತು.
ಇದೀಗ ಈ ಮೊತ್ತವನ್ನು ಮರಳಿ ಪಾವತಿಸುವಂತೆ ಐಸಿಸಿ, ಬಿಸಿಸಿಐ ಅನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದೊಮ್ಮೆ ಹೀಗಾದರೆ ಬಿಸಿಸಿಐಗೆ ಭಾರೀ ಹೊಡೆತ ಬೀಳಲಿದೆ.
ನವೀನ ಹಳೆಯದು