ಮಾಚಕನೂರು : ಶಾಲಾ ಬಾಲಕಿಯ ವಿಡಿಯೋ ಚಿತ್ರೀಕರಣ – ಪೊಲೀಸ್ ಠಾಣೆ ಎದುರು ಜಮಾಯಿಸಿದ ಜನ




ಮಾಚಕನೂರು : ಮಾಚಕನೂರನಲ್ಲಿ ನಡೆದ ಗಣರಾಜ್ಯೋತ್ಸವದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಬಟ್ಟೆ ಬದಲಾಯಿಸುತ್ತಿದ್ದ ಶಾಲಾ ಬಾಲಕಿಯ ವಿಡಿಯೋ ಚಿತ್ರೀಕರಣ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಯುವಕನ ಮೇಲೆ ಬಾಲಕಿಯ ಅಣ್ಣ ಹಲ್ಲೆ ನಡೆಸಿರುವ ಪ್ರಕರಣವೂ ದಾಖಲಾಗಿದೆ ಎಂದು ಜಮಖಂಡಿ ಡಿವೈಎಸ್ ಪಿ ರಾಮನಗೌಡ ಹಟ್ಟಿ ತಿಳಿಸಿದರು.

ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಜನರ ಮೇಲೆ ದೂರು ದಾಖಲಾಗಿದೆ. ಸಮಗ್ರವಾಗಿ ತನಿಖೆ ನಡೆಸಿ ತಪ್ಪಿಸ್ಥಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಪ್ರಕರಣಗಳಿಂದ ಗ್ರಾಮದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿವೆ ಎಂದು ನಗರದ ಪೊಲೀಸ್ ಠಾಣೆ ಎದುರು ರಕ್ಷಣೆ ಕೋರಿ ಮಾಚಕನೂರ ಗ್ರಾಮಸ್ಥರು ಜಮಾವಣೆಗೊಂಡಿದ್ದರು. ಎರಡು ಪ್ರಕರಣಗಳು ಪರಿಶಿಷ್ಟ ಜಾತಿ-ಪಂಗಡದ ಬಾಲಕಿ, ಯುವಕರಿಗೆ ಸಂಬಂಧಿಸಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಆಸ್ಪದ ನೀಡುವುದಿಲ್ಲ ಎಂದು ಜನರಿಗೆ ಡಿವೈಎಸ್ ಪಿ ಸಾಂತ್ವಾನ ಹೇಳಿದರು.

ಜಿಪಂ ಸದಸ್ಯ ಭೀಮನಗೌಡ ಪಾಟೀಲ, ದುಂಡಪ್ಪ ದಾಸರಡ್ಡಿ, ಲಕ್ಷ್ಮಣ ಮಾಲಗಿ, ಸುಭಾಸ ಗಸ್ತಿ, ನಿಂಗಪ್ಪ ಹುಗ್ಗಿ, ದುಂಡಪ್ಪ ದಾಸರಡ್ಡಿ, ಕೃಷ್ಣಾ ಚಿಕ್ಕನ್ನವರ, ಗೋಪಾಲ ದಾಸರೆಡ್ಡಿ, ಬಾಬಾ ಘೋರ್ಪಡೆ, ಶ್ರೀಕಾಂತ ಶೆಟ್ಟರ್, ಹೊಳೆಯಪ್ಪ ಬಿದರಿ, ರಮೇಶ ಜಾಧವ, ದೊಡ್ಡವ್ವಾ ಅರಕೇರಿ, ಲಕ್ಷ್ಮಣ ಮಾಲಗಿ, ಸತ್ಯೆವ್ವಾ ಪೂಜಾರ ಉಪಸ್ಥಿತರಿದ್ದರು.

ನವೀನ ಹಳೆಯದು