ಈ ಕೆಲಸಕ್ಕೆ ಹ್ಯಾಟ್ಸಾಫ್ ಹೇಳಲೇಬೇಕುಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೇಲವ ಸಿನಿಮಾದಲ್ಲಿ ಮಾತ್ರವಷ್ಟೆಯಲ್ಲ ನಿಜಜೀವನದಲ್ಲಿಯೂ ಅವರು ಹೀರೋ ಆಗಿದ್ದಾರೆ. ಸುದೀಪ್ ತೆಗೆದುಕೊಂಡ ನಿರ್ಯಣಯದಿಂದಾಗಿ 1500 ಜನರು ಇಂದು ನೆಮ್ಮದಿಯಿಂದ ಊಟ ಮಾಡುವಂತಾಗಿದೆ.
ಹೌದು, ಕನ್ನಡದ ಬಿಗ್‌ಬಾಸ್‌ ರಿಯಾಲಿಟಿ ಶೋ ಬೆಂಗಳೂರಿನ ಇನ್ನೋವೆಟಿವ್‌ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಶೋ ಬೆಂಗಳೂರಿನಲ್ಲಿ ನಡೆಯಲು ಕಾರಣ ಸುದೀಪ್ ಅವರಂತೆ. ಮೊಟ್ಟ ಮೊದಲ ಬಾರಿಗೆ ಇಲ್ಲಿ ಆಗಮಿಸಿದ್ದ ಸುದೀಪ್ ಅವರು, ನಮ್ಮ ಶೋ ಇಲ್ಲಿಯೇ ನಡೆಯಲಿ. ಇದರ ಲಾಭ ನಮ್ಮ ಜನರೇ ಪಡೆಯುವಂತಾಗಲಿ. ಈ ಶೋ ಇಲ್ಲಿ ನಡೆದ್ರೆ ಸಾಕಷ್ಟು ಜನರಿಗೆ ಕೆಲಸ ಸಿಗುತ್ತದೆ. ಆದ್ದರಿಂದ ಬಿಗ್‌ಬಾಸ್‌ ಬೆಂಗಳೂರಿನಲ್ಲಿಯೇ ನಡೆಯಲಿ ಎಂದು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದರಂತೆ ಸುದೀಪ್‌. 

ಸುದೀಪ್ ಆಶಯದಂತೆ ಸತತ ಬಿಗ್‌ಬಾಸ್‌ನ 4 ಸೀಸನ್‌ಗಳು ಇಲ್ಲಿಯೇ ನಡೆದಿವೆ. 5 ನೇ ಸೀಸನ್‌ ಕೂಡ ಇಲ್ಲಿಯೇ ನಡೆಯುತ್ತಿದೆ. ಪರಿಣಾಮ ಇಲ್ಲಿಯ 1500 ಜನರಿಗೆ ಕೆಲಸ ಸಿಕ್ಕಿದೆಯಂತೆ. ಇಂದು ಇಷ್ಟು ಜನರು ನೆಮ್ಮದಿಯಿಂದ ಊಟ ಮಾಡಲು ಕಾರಣ ಸುದೀಪ್ ಅವರೇ ಎಂದು ಇನ್ನೋವೆಟಿವ್ ಫಿಲ್ಮ್ ಸಿಟಿಯ ಮಾಲೀಕ ಸರವಣ ಪ್ರಸಾದ್ ಅವರು ಹೇಳಿಕೊಂಡಿದ್ದಾರೆ. 


ಇತ್ತೀಚಿಗೆ ಬಿಗ್‌ಬಾಸ್‌ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಪ್ರಸಾದ್‌, ಸುದೀಪ್ ಅವರ ಈ ಕೆಲಸದ ಬಗ್ಗೆ ಮಾತನಾಡಿದ್ರು. ಸುದೀಪ್ ಅವರ ಕಾರಣದಿಂದಾಗಿ ಇಂದು ಇನ್ನೋವೆಟಿವ್‌ ಸಿಟಿ ತುಂಬಾ ಪ್ರಸಿದ್ಧವಾಗುತ್ತಿದೆ ಎಂದರು. 

ನವೀನ ಹಳೆಯದು